ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತುವಿವಾಹಿತ ಮಹಿಳೆಯೊಬ್ಬಳು, ಮದುವೆಯಾದ ಕೇವಲ 58 ದಿನಗಳಲ್ಲಿ ವರದಕ್ಷಿಣೆಗೆ ಬಲಿಯಾಗಿರುವ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಮನೆಯವರ ಒಪ್ಪಿಗೆಯಿಂದ ಗಾನವಿ ಮತ್ತು ಸೂರಜ್ ಎಂಬುವವರ ವಿವಾಹವಾಗಿತ್ತು. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮತ್ತು ಆರತಕ್ಷತೆ ಶಾಸ್ತ್ರ ನಡೆಸಲಾಗಿತ್ತು.
ಗಾನವಿ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಬೆದರಿಕೆ ಹಾಕಿದ್ದನು. ಮನೆಗೆ ಬಂದ ಪತ್ನಿಯ ಪೋಷಕರಿಗೂ ಅವಮಾನ ಮಾಡಿ, ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದನು.
ಪತಿ ಮತ್ತು ಆತನ ಮನೆಯವರ ನಿರಂತರ ಕಿರುಕುಳದಿಂದ ನೊಂದ ಗಾನವಿ, ತಾಯಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿಸಿದ್ದರೂ, ಉಸಿರುಗಟ್ಟುವಿಕೆಯಿಂದ ಮೆದುಳಿಗೆ ಹಾನಿಯಾಗಿತ್ತು (ಬ್ರೇನ್ ಡೆಡ್). ವೈದ್ಯರ ತೀವ್ರ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಗಗನಾ ಇಂದು ಸಾವನ್ನಪ್ಪಿದ್ದಾರೆ. ಆಕೆಯ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿ ಸೂರಜ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
0 Comments