ಬೆಳಗಾವಿ: ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿ ಕುಡಚಿಯಿಂದ ಪ್ರಾರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮತಿ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ 10ನೇ ದಿನಕ್ಕೆ ಕಾಲಿಟ್ಟಿದ್ದು, ಈ ಧರಣಿ ಸ್ಥಳಕ್ಕೆ ಚಿಕ್ಕೋಡಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಶುಕ್ರವಾರ ರಾತ್ರಿ ಭೇಟಿ ನೀಡಿದರು.
ಈ ವೇಳೆ ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮತಿ ಸದಸ್ಯರು ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಕಾಮಗಾರಿ ಕುಡಚಿಯಿಂದ ಪ್ರಾರಂಭಿಸುವಂತೆ, ಕುಡಚಿ ರೈಲು ನಿಲ್ದಾಣಕ್ಕೆ ಹಜರತ ಮಾಸಾಹೇಬಾ ಕುಡಚಿ ಜಂಕ್ಷನ ಎಂದು ನಾಮಕರಣ ಮಾಡುವುದು ಹಾಗೂ ವಿವಿಧ ಮೂಲಭೂತ ಸೌಲಭ್ಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೂ ಮನವಿ ಸಲ್ಲಿಸಿದರು.
ಈ ವೇಳೆ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಮಾತನಾಡಿ, ಕುಡಚಿಯಿಂದ ರೈಲು ಮಾರ್ಗ ಕಾರ್ಯ ನಡೆಯುವವರೆಗೂ ಸತ್ಯಾಗ್ರಹ ನಿಲ್ಲುವುದಿಲ್ಲ. ರೈಲು ಅಧಿಕಾರಿಗಳು, ಗುತ್ತಿಗೆದಾರರು ಸೇರಿ ಬರೀ ಮೂಗಿಗೆ ತುಪ್ಪು ಹಚ್ಚುವ ಕಾರ್ಯ ನಡೆಯುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ರೈತರೂ ಸಹ ರೈಲು ಮಾರ್ಗಕ್ಕೆ ಪೂರ್ತಿ ಬೆಂಬಲ ಸೂಚಿಸಿದ್ದಾರೆ. ಹೀಗಿದ್ದಾಗ್ಯೂ ಸರ್ಕಾರದ ನಿರ್ಲಕ್ಷ್ಯತನ ಸಲ್ಲದುಯೆಂದು ಬೇಸರ ವ್ಯಕ್ತಪಡಿಸಿದರು. ನಂತರ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು,ರೈಲ್ವೆ ಮಾರ್ಗದ ಅವಶ್ಯಕತೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಪಡೆದುಕೊಂಡರು. ಅಲ್ಲದೇ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಮಾತನಾಡಿ, 2010-11ರಲ್ಲಿ ಯುಪಿ ಸರ್ಕಾರವಿದ್ದಾಗ ಕುಡಚಿಗೆ ರೇಲ್ವೆ ಮಂಜೂರಾಗಿದೆ. ಇಲ್ಲಿ ನಿತ್ಯ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಇತರ ಸಾರ್ವಜನಿಕರಿಗೆ ರೇಲ್ವೆ ಸೇವೆ ಸಮಪರ್ಕವಾಗಿ ಇಲ್ಲದರಿಂದ ಸಮಸ್ಯೆಯಾಗುತ್ತಿದೆ. ಶೀಘ್ರವೇ ಇಲ್ಲಿರುವ ಸಮಸ್ಯೆಯನ್ನು ಕೇಂದ್ರದ ರೇಲ್ವೆ ಸಚಿವರ ಜೊತೆ ಮಾತನಾಡಿ ಸಮಸ್ಯೆ ಇತ್ಯರ್ಥವಾಗುವಂತೆ ಮಾಡಲಾಗುವುದು. ಅಲ್ಲದೇ ಜನೇವರಿ ಮೊದಲ ವಾರಲ್ಲಿ ರೇಲ್ವೆ ಇಲಾಖೆಯ ಸಭೆ ನಡೆಯಲಿದ್ದು, ಕುಡಚಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಹೋರಾಟದ ಕುರಿತು ರೇಲ್ವೆ ಸಭೆಯಲ್ಲಿ ಪ್ರಸ್ತಾಪಿಸಿ ಎಲ್ಲರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಶ್ರಮಿಸಲಾಗುವುದು ಎಂದರು.
ಬೇಡಿಕೆಗಳು: 1. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗ ಕಾಮಗಾರಿಯನ್ನು ಕುಡಚಿಯಿಂದಲೂ ಪ್ರಾರಂಭವಾಗಬೇಕು. 2. ಲೋಕಾಪೂರದಿಂದ-ಧಾರವಾಡಕ್ಕೆ ಮಾರ್ಗ ವಿಶ್ವರಣೆ ಮಾಡಬೇಕು. 3. ಈಗಾಗಲೇ ಲೋಕಾಪುರದವರೆಗೆ ಪೂರ್ಣಗೊಂಡ ಕುಡಬಬಾಗಲಕೊಟೆ ರೈಲು ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಓಡಿಸುವುದು. 4. ಕುಡಚಿ ರೈಲು ನಿಲ್ದಾಣವನ್ನು ಅಮೃತ ಭಾರತ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸುವುದು, 5. ರೈಲು ನಿಲ್ದಾಣದಲ್ಲಿ ಕೂಡಲೆ ಎರಡು ಪ್ಲಾಟಫಾರ್ಮಗಳಿಗೆ ಮೇಲ್ಯಾವಣೆ (ಶೇಪ್) ನಿರ್ಮಾಣ ಮಾಡಬೇಕು. 6. ಮಿರಜ-ಬೆಳಗಾವಿ ಮಾರ್ಗದಲ್ಲಿ ಅತಿ ದೊಡ್ಡ ರೇಲ್ವೆ ನಿಲ್ದಾಣವಾದ ಕುಡಚಿ ನಿಲ್ದಾಣಕ್ಕೆ ಪೊಲೀಸ್ ಠಾಣೆ ಆರಂಭಿಸಬೇಕು. 7. ಪಾರ್ಸಲ್ ಲಗ್ಗೇಜ ಕೇಂದ್ರ, ಸೂಕ್ತವಾದ ಪಾರ್ಕಿಂಗ್ ಸ್ಥಳ, ಆಟೋ ಸ್ಟಾಂಡ್ ನಿರ್ಮಾಣ, ಗುಣಮಟ್ಟದ ಮಹಿಳಾ ಶೌಚಾಲಯ ನಿರ್ಮಾಣ, ಸೂಕ್ತವಾದ ವೇಳಾ ಪಟ್ಟಿ, ರೈಲು ಭೋಗಿಗಳ ಡಿಜಿಟಲ್ ಇಂಡಿಕೇಶನ್ ಅಳವಡಿಸುವುದು, ರೈಲು ನಂ. 11097-11098 ಪೂರ್ಣಾ ಎಕ್ಸಸ್, 16209-16201 ಮೈಸೂರು ಅಜಮೇರ ಎಕ್ಸಪ್ರೇಸ್, 16531-16532 ಬೆಂಗಳೂರು ಆಜಮೇರ ಎಕ್ಸಪ್ರೇಸ್ ರೈಲುಗಳು ಸೇರಿದಂತೆ ಕುಡಚಿ ಮಾರ್ಗವಾಗಿ ದೆಹಲಿಗೆ ತೆರಳುವ ಎಲ್ಲ ಎಕ್ಸಪ್ರೇಸ್ ರೈಲುಗಳನ್ನು ನಿಲುಗಡೆ ಮಾಡುವುದು ಸೇರಿದಂತೆ ಕುಡಚಿ ರೈಲು ನಿಲ್ದಾಣದಕ್ಕೆ ಪಟ್ಟಣದ ಆರಾಧ್ಯ ದೇವತೆಯಾದ ಹಜರತ ಮಾಸಾಹೇಬಾ ಕುಡಚಿ ಜಂಕ್ಷನ್ ಎಂದು ನಾಮಕರಣ ಮಾಡುವುದು ಸೇರಿದಂತೆ ಮುಖ್ಯವಾಗಿ ಕುಡಚಿ ರೇಲ್ವೆ ನಿಲ್ದಾಣವನ್ನು ಅಮೃತ ಭಾರತ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬ ಹಲವು ಬೇಡಿಕೆಗಳನ್ನು ಕೂಡಲೆ ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಈ ಮೂಲಕ ತಮ್ಮಲ್ಲಿ ವಿನಯಪೂರ್ವಕವಾಗಿ ಮನವಿಯನ್ನು ಮುಂದಿರಿಸಿದ್ದಾರೆ.
ಈ ವೇಳೆ ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಬುಢಾ ಮಾಜಿ ಅಧ್ಯಕ್ಷ ಲಕ್ಷಣರಾವ್ ಚಿಂಗಳೆ ಸೇರಿದಂತೆ ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮತಿ ಸದಸ್ಯರು ಇದ್ದರು.
0 Comments