ಬೆಳಗಾವಿ: ಶಿಕ್ಷಕಿ ಸಾಹಿತಿ ಪ್ರಭಾ ಬಾಲಕೃಷ್ಣ ಬೋರಗಾಂವಕರ ಅವರ ಕೃತಿ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ನಿಧಿ ಪುಸ್ತಕ ಪ್ರಶಸ್ತಿ ಆಯ್ಕೆಯಾಗಿದ್ದಾರೆ.
2024 ರಲ್ಲಿ ಪ್ರಕಟವಾದ " ಹೆಣ್ಣು ಹುಣ್ಣಲ್ಲ ಹೂವು ಮತ್ತು ಇತರೆ ಲೇಖನಗಳು " ಲೇಖನ ಸಂಕಲನಕ್ಕೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದಿಂದ ಶ್ರೀ ಅಪ್ಪಾಸಾಹೇಬ ಸದರ ಜೋಶಿ ದತ್ತಿ ನಿಧಿ ಪುಸ್ತಕ ಪ್ರಶಸ್ತಿ ಸಮಾರಂಭ ಇಂದು ನಡೆಯಲಿದೆ.
ಒಬ್ಬ ಹೆಣ್ಣು ತನ್ನ ಕುಟುಂಬ,ನೆರೆ ಹೊರೆ, ಸಮಾಜ ಹಾಗೂ ವೃತ್ತಿ ಕ್ಷೇತ್ರದಲ್ಲಿನ ಅಧಿಕಾರಿ ವರ್ಗದವರಿಂದ ಏನೆಲ್ಲಾ ನೋವು,ಸಂಕಟ, ಅನ್ಯಾಯ, ಶೋಷಣೆ ಅನುಭವಿಸುತ್ತಾಳೆ ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ಮಹಿಳಾ ಚಿಂತಕಿಯಾದ ಪ್ರಭಾ ಅವರು ಈ ಕೃತಿಯನ್ನು ರಚಿಸಿದ್ದಾರೆ.
ಇದೇ ಕೃತಿಗೆ ಈ ಹಿಂದೆ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಿಂದ ಅಬ್ಬಿಗೇರಿ ದತ್ತಿ ನಿಧಿ ಪ್ರಶಸ್ತಿ ಬಂದಿತ್ತು. ಇಂದು ಹಿಂದವಾಡಿಯ ಐ ಎಂ ಇ ಆರ್ ಸಭಾಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅವರ ಕುಟುಂಬದವರು ಹಾಗೂ ಸಹೃದಯಿ ಓದುಗರ ಬಳಗ, ಸ್ನೇಹಿತರು ಅವರನ್ನು ಅಭಿನಂದಿಸಿದ್ದಾರೆ.
0 Comments